ಸತ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2020ರ ಡಿಸೆಂಬರ್ 7 ರಿಂದ 10 ಆಗಸ್ಟ್ 2024ರವರೆಗೆ ಝೀ ಕನ್ನಡದಲ್ಲಿ ಪ್ರಸಾರವಾಯಿತು. ಈ ಕಾರ್ಯಕ್ರಮವು ಝೀ ಸಾರ್ಥಕ್ನ ದೂರದರ್ಶನ ಸರಣಿ ಸಿಂಧುರಾ ಬಿಂದುವಿನ ಅಧಿಕೃತ ರಿಮೇಕ್ ಆಗಿದೆ. ಇದರಲ್ಲಿ ಗೌತಮಿ ಜಾದವ್ ಮತ್ತು ಸಾಗರ್ ಬಿಳಿಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥಾವಸ್ತು == ಸತ್ಯ ಎಂಬ ಕಾರ್ತಿಕ್ ಎಂಬವವನ್ನು ಪ್ರೀತಿಸಲು ಪ್ರಾರಂಭ ಮಾಡುತ್ತಾಳೆ. ಆದರೆ ಕಾರ್ತಿಕ್, ಸತ್ಯನ ಸಹೋದರಿ ದಿವ್ಯಾಳ ಕಡೆಗೆ ಆಕರ್ಷಿತನಾಗುತ್ತಾನೆ. ಆದರೆ, ಅದೃಷ್ಟಕ್ಕೆ ಸರಿಯಾಗಿ ಸತ್ಯ ಮತ್ತು ಕಾರ್ತಿಕ್ ಮದುವೆಯಾಗುತ್ತಾರೆ. == ಪಾತ್ರವರ್ಗ == ==== ಮುಖ್ಯ ಪಾತ್ರದಲ್ಲಿ ==== ಗೌತಮಿ ಜಾದವ್: ಸತ್ಯ ಪಾತ್ರದಲ್ಲಿ, ಕಥಾ ನಾಯಕಿಯಾಗಿ. ಸಾಗರ್ ಬಿಳಿಗೌಡ: ಕಾರ್ತಿಕ್ ಪಾತ್ರದಲ್ಲಿ, ಕಥಾ ನಾಯಕನ ಪಾತ್ರದಲ್ಲಿ. ==== ಪೋ‍ಷಕ ಪಾತ್ರದಲ್ಲಿ ==== ಮಾಲತಿ ಸರ್ದೇಶ್ಪಾಂಡೆ: ಸೀತಾ ಪಾತ್ರದಲ್ಲಿ. ಗಿರಿಜಾ ಲೋಕೇಶ್: ಸತ್ಯ ಮತ್ತು ದಿವ್ಯಾಳ ಅಜ್ಜಿಯಾಗಿ. ಶ್ರೀನಿವಾಸ ಮೂರ್ತಿ: ರಾಮಚಂದ್ರನ ಪಾತ್ರದಲ್ಲಿ. ಅಭಿಜಿತ್: ಲಕ್ಷ್ಮಣನ ಪಾತ್ರದಲ್ಲಿ ಪ್ರಿಯಾಂಕಾ: ದಿವ್ಯಾ ಪಾತ್ರದಲ್ಲಿ. ಸತ್ಯಾಳ ಸೋದರಿಯಾಗಿ. == ರೂಪಾಂತರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸತ್ಯ @ ಐ ಎಮ್ ಡಿ ಬಿ ಝೀ5ನಲ್ಲಿ ಸತ್ಯ